ಅಯೋಧ್ಯಾ ರಾಮಮಂದಿರ-ಬಾಬ್ರಿ ಮಸೀದಿ ತೀರ್ಪಿಗೆ ಕ್ಷಣಗಣನೆ: ದೇಶಾದ್ಯಂತ ಕಟ್ಟೆಚ್ಚರ ನವದೆಹಲಿ, ನವೆಂಬರ್ 09, 2019 (..):ಐತಿಹಾಸಿಕ ಅಯೋಧ್ಯಾ ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಭೂ ವಿವಾದದ ತೀರ್ಪು ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಸುಪ್ರಿಂಕೋರ್ಟ್​ ಇಂದು ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ. ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ.. ಇಂದು ಬೆಳಗ್ಗೆ 9.30ಕ್ಕೆ ಸಿಜೆಐ ರಂಜನ್​ ಗೊಗೊಯಿ ಅವರು ಸುಪ್ರೀಂಕೋರ್ಟ್​ಗೆ ಆಗಮಿಸಲಿದ್ದು ಈಗಾಗಲೇ ಅವರ ನಿವಾಸಕ್ಕೂ ಭದ್ರತೆ ಒದಗಿಸಲಾಗಿದೆ.ರಾಜ್ಯದಲ್ಲೂ ಸಹ ಖಾಕಿ ಪಡೆ ಅಲರ್ಟ್​ ಆಗಿದ್ದು ಕೊಡ ಎಲ್ಲ ಜಿಲ್ಲೆಗಳಲ್ಲೂ ಸೂಕ್ತ ಭದ್ರತೆ ಒದಗಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸಹ ಪ್ರಚೋದನಾತ್ಮಕ ಪೋಸ್ಟ್​ಗಳನ್ನು ಹಾಕಬಾರದು ಎಂದು ಆಯಾ ಜಿಲ್ಲಾಧಿಕಾರಿಗಳು ಖಡಕ್​ ಸೂಚನೆ ನೀಡಿದ್ದಾರೆ.