ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ: ಬಿಎಸ್ ವೈ ಮತ್ತು ಬಿವೈ ವಿಜಯೇಂದ್ರ ವಿರುದ್ದ ಯತ್ನಾಳ್ ಗುಡುಗು ಬೆಂಗಳೂರು,ಫೆಬ್ರವರಿ,27,2024(..):ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಗೆ ಮತ ಹಾಕಿದ ಹಿನ್ನೆಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮಲ್ಲಿ ಬರಿ ಅಡ್ಜೆಸ್ಟ್ ಮೆಂಟ್ ಆಗಿ ಹೋಗಿದೆ. ನಾನು ಪದೇ ಪದೇ ಈ ವಿಚಾರ ಹೇಳುತ್ತಿದ್ದೇನೆ. ಎಸ್ ಟಿ ಸೋಮಶೇಖರ್ ಈ ರೀತಿ ಮಾಡಬಾರದಿತ್ತು. ಎಸ್ ಟಿ ಸೋಮಶೇಖರ್ ರನ್ನು ಮನವೊಲಿಸುವಲ್ಲಿ ತಂದೆ ಮತ್ತು ಮಗ ವಿಫಲರಾಗಿದ್ದಾರೆ ಎಂದು ಪರೋಕ್ಷವಾಗಿ ಬಿಎಸ್ ವೈ ಮತ್ತು ಬಿವೈ ವಿಜಯೇಂದ್ರ ವಿರುದ್ದ ಕಿಡಿಕಾರಿದರು. : - - - - – –