ತಾರಕಕ್ಕೇರಿದ ಟಿಪ್ಪು ಜಯಂತಿ ಆಚರಣೆ ಸ್ಥಳದ ವಿಚಾರ: ಹೈ ಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವ ತನ್ವೀರ್ ಸೇಠ್ ….. ಮೈಸೂರು,ನ,8,2019(..): ಟಿಪ್ಪು ಜಯಂತಿ ಆಚರಣೆ ಸ್ಥಳ ವಿಚಾರವಾಗಿ ಕಳೆದ ಎರಡು ದಿನ ಮುಡಾ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ ಮಾಜಿ ಸಚಿವ ತನ್ವೀರ್ ಸೇಠ್ ಇದೀಗ ಜಿಲ್ಲಾಡಳಿತ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಟಿಪ್ಪು ಜಯಂತಿ ಅಚರಿಸಲು ಅವಕಾಶ ಕೊಡುವಂತೆ ಕಾಂಗ್ರೆಸ್ ಶಾಸಕ ಮಾಜಿ ಸಚಿವ ತನ್ವೀರ್ ಸೇಠ್ ಬಿಗಿ ಪಟ್ಟು ಹಿಡಿದಿದ್ದಾರೆ. ಆದರೆ ಜಿಲ್ಲಾಡಳಿತ ಪಂಜಿನಕವಾಯತು ಮೈದಾನದಲ್ಲಿ ಸ್ಥಳ ನೀಡಲು ನಿರಾಕರಿಸಿದೆ. ಹೀಗಾಗಿ ಶಾಸಕ ತನ್ವೀರ್ ಸೇಠ್ ಜಿಲ್ಲಾಡಳಿತ ನಡೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದ್ದು ಇಂದೇ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ತನ್ವೀರ್ ಸೇಠ್ ಪರವಾಗಿ ವಕೀಲ ನವೀದ್ ಆಹ್ಮದ್ ವಾದ ಮಂಡಿಸಲಿದ್ದಾರೆ. : - - - –- .