ನಾನೇನು ಸಿಎಂ ಮನೆಗೆ ಸಂಬಂಧ ಬೆಳೆಸಲು ಹೋಗಿದ್ನಾ..?- ಸಚಿವ ಜಗದೀಶ್ ಶೆಟ್ಟರ್ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಿಡಿ…. ಹಾಸನ, ನ.7,2019(..): ಮರುಮದುವೆ ಎಂಬ ಹೇಳಿಕೆ ಕುರಿತು ಸಚಿವ ಜಗದೀಶ್ ಶೆಟ್ಟರ್ ವಿರುದ್ದ ಗರಂ ಆದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನಾನೇನು ಸಿಎಂ ಮನೆಗೆ ಸಂಬಂಧಕ್ಕೆ ಹೋಗಿದ್ನಾ ಎಂದು ಹರಿಹಾಯ್ದಿದ್ದಾರೆ. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ನೀಡಿರುವ ಮರು ಮದುವೆ ಎಂಬ ಹೇಳಿಕೆ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಜಗದೀಶ್ ಶೆಟ್ಟರ್ ಅವರು ಅದೇನೋ ಮರು ಮದುವೆ, ಬೇಳೆ ಕಾಳ್ ಎಂದಿದ್ದಾರೆ. ನಾನೇನು ಸಿಎಂ ಮನೆಗೆ ಸಂಬಂಧ ಬೆಳೆಸಲು ಹೋಗಿದ್ನಾ..? ನಾನು ಮತ್ತೆ ಸಿದ್ಧರಾಮಯ್ಯ ಮುಖ ನೋಡ್ತೀನಾ..? ನಾನು 60 ವರ್ಷ ರಾಜಕಾರಣ ಮಾಡಿದ್ದೇನೆ. ಮಾತನಾಡುವಾಗ ಸ್ವಲ್ಪ ಪ್ರಜ್ಞೆ ಇರಲಿ ಎಂದು ವಾಗ್ದಾಳಿ ನಡೆಸಿದರು. ನಾನು ಹೋರಾಟ ಮಾಡುತ್ತ ರಾಜಕೀಯ ಮಾಡಿಕೊಂಡು ಬಂದವನು. ಹೇಗೆ ಹೋರಾಟ ಮಾಡುವುದು ಎಂಬುದು ಗೊತ್ತಿದೆ ಎಂದ ಅವರು, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. : - - – - -