ನಿಮಗೆ ಜೀವದ ಬೆಲೆ ಗೊತ್ತಿದ್ಯಾ…?- ಸಚಿವ ಸಿ.ಟಿ ರವಿಗೆ ಯುವತಿಯಿಂದ ತರಾಟೆ… ಚಿಕ್ಕಮಗಳೂರು,ನ,5,2019(..): ನಿನ್ನೆ ರಸ್ತೆಯಲ್ಲಿನ ಗುಂಡಿಯಿಂದಾಗಿ ಬೈಕ್ ನಿಂದ ಬಿದ್ದು ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬರು ಪ್ರವಾಸೋದ್ಯಮ ಸಚಿವ ಸಿ.ಟಿ ರವಿಗೆ ತರಾಟೆ ತೆಗೆದುಕೊಂಡಿದ್ದಾರೆ. ನಿನ್ನೆ ಸಿಂದೂಜಾ (23) ಎಂಬ ಯುವತಿ ವಿದೇಶಕ್ಕೆ ತೆರಳಲು ಪಾಸ್​ಪೋರ್ಟ್​ ವೇರಿಫಿಕೇಶನ್​ಗಾಗಿ ತನ್ನ ತಂದೆ ಜತೆ ಬೈಕ್​ನಲ್ಲಿ ಹೋಗುತ್ತಿದ್ದಳು. ಈ ವೇಳೆ ಚಿಕ್ಕಮಗಳೂರಿನ ದಂಡರಮಕ್ಕಿ ಬಳಿ ಗುಂಡಿಬಿದ್ದಿದ್ದ ರಸ್ತೆಯಿಂದಾಗಿ ಬೈಕ್ ಸ್ಕಿಡ್ ಆಗಿ ಬಿದ್ದು ಯುವತಿ ಸಿಂಧೂಜಾ ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಇದೀಗ ಯುವತಿಯೊಬ್ಬಳು ವಿಡಿಯೋ ಮೂಲಕ ಸಚಿವ ಸಿ.ಟಿ ರವಿಗೆ ತರಾಟೆ ತೆಗೆದುಕೊಂಡಿದ್ದಾಳೆ. ನಿಮಗೆ ಜೀವದ ಬೆಲೆ ಗೊತ್ತಿದ್ಯಾ..? ನೀವು ನಿಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೇ ಇಂತಹ ದುರಾದೃಷ್ಟಕರ ಘಟನೆ ನಡೆಯುತ್ತಿರಲಿಲ್ಲ ಎಂದು ಸಚಿವರ ಬೇಜವಾಬ್ದಾರಿತನವನ್ನ ಪ್ರಶ್ನಿಸಿದ್ದಾಳೆ. : - –- -