ಪ್ರಾಣಕ್ಕೆ ಕುತ್ತು ತಂದ ಜೋಕಾಲಿ ಆಟ: 13 ವರ್ಷದ ಬಾಲಕ ಸಾವು. ದಾವಣಗೆರೆ,ಫೆಬ್ರವರಿ,24,2024(..):ಜೋಕಾಲಿ ಆಡುವ ವೇಳೆ ಕುತ್ತಿಗೆಗೆ ಹಗ್ಗ ಸಿಲುಕಿ 13 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸವಳಂಗದಲ್ಲಿ ಈ ಘಟನೆ ನಡೆದಿದೆ. ಫೆ.21 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಟ್ರೇಶ್(13) ಮೃತಪಟ್ಟ ಬಾಲಕ. ಮನೆಯಲ್ಲಿ ಜೋಕಾಲಿ ಆಡುತ್ತಿದ್ದ ವೇಳೆ ಹಗ್ಗ ಕುತ್ತಿಗೆಗೆ ಸಿಲುಕಿ ಈ ಘಟನೆ ನಡೆದಿದೆ. ಬಾಲಕ ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದನು ಎನ್ನಲಾಗಾಗಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. : 13-- - - -