ಚಾಕುವಿನಿಂದ ಇರಿದು ನೈಜೀರಿಯಾ ಯುವಕನ ಹತ್ಯೆ… ಬೆಂಗಳೂರು,ನ,3,2019(..): ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ನೈಜೀರಿಯಾ ಮೂಲದ ಯುವಕನನ್ನ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹೆಣ್ಣೂರು ಬಳಿಯ ಜಾನಕಿರಾಮ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಾರೋಡೆ(29) ಹತ್ಯೆಯಾದ ನೈಜೀರಿಯಾ ಯುವಕ. ಸ್ಯಾಮುಯಲ್ ಹತ್ಯೆ ಮಾಡಿರುವ ಆರೋಪಿ. ಸ್ಯಾಮುಯಲ್ ಮಾರೋಡೆಗೆ ಪರಿಚಯಸ್ಥನಾಗಿದ್ದು ಈ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾರೋಡೆಯನ್ನ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಹೆಣ್ಣೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ. : - - - –