ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ರವಿ ಬಸ್ರೂರು ‘ಗಿರ್ಮಿಟ್​’ ಬೆಂಗಳೂರು, ನವೆಂಬರ್ 03, 2019 (..): ಮಕ್ಕಳ ಮೊಟ್ಟ ಮೊದಲ ಕಮರ್ಷಿಯಲ್​ ಚಿತ್ರವೆಂದು ಹೆಸರು ಪಡೆದಿರುವ ರವಿ ಬಸ್ರೂರು ಮತ್ತು ತಂಡದ ಪರಿಶ್ರಮದ ಗಿರ್ಮಿಟ್​ ಚಿತ್ರವು ಈಗ ಮತ್ತೊಂದು ದಾಖಲೆ ಬರೆದಿದೆ. ಚಲನಚಿತ್ರಗಳ ಮಾನದಂಡ ಸಂಸ್ಥೆಯಾದ ಐಎಂಡಿಬಿ ನೀಡಿದ ಬಹು ನಿರೀಕ್ಷಿತ ಭಾರತೀಯ ಚಿತ್ರಗಳ ಪೈಕಿ ಬಸ್ರೂರು ಚಿತ್ರ 5 ನೇ ಸ್ಥಾನವನ್ನು ಪಡೆದಿದೆ. ಭಾರತೀಯ ಚಿತ್ರರಂಗದಲ್ಲಿ ಮೊದಲು ಎನ್ನಲಾದ ಮಕ್ಕಳ ವಾಣಿಜ್ಯಾತ್ಮಕ ಚಿತ್ರಕ್ಕೆ ಮತ್ತೊಂದು ಗರಿ ಮೂಡಿದೆ.