ಹೋರಿ ಓಟದ ಸ್ಪರ್ಧೆ ವೇಳೆ ಶಾಸಕ ಎಂ.ಪಿ ರೇಣುಕಾಚಾರ್ಯಗೆ ತಿವಿದ ಗೂಳಿ ದಾವಣಗೆರೆ,ನ,1,2019(..): ಹೋರಿ ಓಟದ ಸ್ಪರ್ಧೆಯ ವೇಳೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಗೂಳಿ ಗುದ್ದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡೇರಿ ಗ್ರಾಮದಲ್ಲಿ ಹೋರಿ ಓಟ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ಈ ವೇಳೆ ಶಾಸಕ ಎಂ.ಪಿ ರೇಣುಕಾಚಾರ್ಯ ಅಲ್ಲಿಗೆ ಆಗಮಿಸಿದ್ದರು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಜನತೆ ರೇಣುಕಾಚಾರ್ಯರವನ್ನು ಹೊತ್ತುಕೊಂಡು ಕುಣಿಯುತ್ತಿದ್ದರು ಈ ವೇಳೆಯಲ್ಲಿ ಎದುರಿನಿಂದ ಬಂದ ಹೋರಿಯೊಂದು ತಿವಿದಿದೆ. ಗೂಳಿ ತಿವಿದಿದ್ದಕ್ಕೆ ರೇಣುಕಾಚಾರ್ಯ ಕೆಳಕ್ಕೆ ಬಿದ್ಧಿದ್ದಾರೆ. ಘಟನೆಯಲ್ಲಿ ಶಾಸಕ ರೇಣುಕಾಚಾರ್ಯ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ. ಶಾಸಕ ರೇಣುಕಾಚಾರ್ಯ ಅಪಾಯದಿಂದ ಪಾರಾಗಿದ್ದಾರೆ. : -- - -