ಟಿಪ್ಪು ಸಾಧನೆ ಓದುವುದು ಬೇಡ ಅಂದ್ರೆ ಮತ್ತೇನು ಯಡಿಯೂರಪ್ಪ ಜೈಲಿಗೆ ಹೋದದ್ದು, ಗಣಿಲೂಟಿ, ಅಪರೇಷನ್ ಕಮಲ…ಓದ್ಬೇಕ : ಶಾಸಕ ತನ್ವೀರ್ ಸೇಠ್ ಮೈಸೂರು, ಅ.31, 2019 : (.. ) ಬಿಜೆಪಿಯವರಿಗೆ ಮಕ್ಕಳು ಟಿಪ್ಪು ಸಾಧನೆ ಓದುವುದು ಬೇಡ. ಬದಲಿಗೆ ಮಕ್ಕಳು ಓದ ಬೇಕಾಗಿರುವುದು ಯಡಿಯೂರಪ್ಪ ಜೈಲಿಗೆ ಹೋದ ವಿಚಾರ‌. ಆಪರೇಷನ್ ಕಮಲ ವಿಚಾರ. ಗಣಿ ಲೂಟಿ ವಿಚಾರ. ಇದು ನಿಜವಾದ ಇತಿಹಾಸ. ಇದನ್ನೇ ಮಕ್ಕಳು ಓದಲಿ. ಮೈಸೂರಿನಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಕಿಡಿ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್ ಹೇಳಿದಿಷ್ಟು… ಬಿಜೆಪಿ ಬ್ರಿಟಿಷರ ಪರ ನಿಂತವರು. ಗಾಂಧೀಜಿಯನ್ನು ಕೊಂದವರು. ಬಿಜೆಪಿಯವರು ಇತಿಹಾಸ ಸ್ವಾತಂತ್ರ್ಯ ಪುಟದಲ್ಲಿ ಇಲ್ಲ. ಬಿಜೆಪಿಯದು ಹಿಟ್ಲರ್ ಸಾಮ್ರಾಜ್ಯಕ್ಕಿಂತ ಕೀಳು. ಅಲ್ಪಸಂಖ್ಯಾತ ಸಮುದಾಯ, ಟಿಪ್ಪು ಜಯಂತಿ ಮಾಡಿ ಪಠ್ಯದಲ್ಲಿ ಸೇರಿಸಲು ಕೇಳಿರಲಿಲ್ಲ. ಟಿಪ್ಪುವಿನದು ದೊಡ್ಡ ಇತಿಹಾಸ. ಅದನ್ನು ವ್ಯವಸ್ಥಿತವಾಗಿ ತಿರುಚಿ ಸೇಡಿನ ರಾಜಕಾರಣ ಮಾಡಲು ಬಿಜೆಪಿ ಹವಣಿಸುತ್ತಿದೆ.ಅಲ್ಪ ಸಂಖ್ಯತರು ಅವರ ಪರ ಮಾತನಾಡುವವರನ್ನು ಘಾತಕುಶಕ್ತಿಗಳಂತೆ ಬಿಂಬಿಸಲಾಗುತ್ತಿದೆ. ಆ ಮೂಲಕ ಬಿಜೆಪಿ ಇತಿಹಾಸದ ಜೊತೆ ಚೆಲ್ಲಾಟವಾಡುತ್ತಿದೆ. ಒಂದು ಕೋಮಿನ ವಿರುದ್ದ ಅಭಿಪ್ರಾಯ ಮೂಡಿಸುತ್ತಿದೆ. ಮೈಸೂರಿನಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆ‌. ಟಿಪ್ಪು ವಿಚಾರವಾಗಿ ಸಂಸದ ಪ್ರತಾಪ್‌ಸಿಂಹ ಅಪ್ಪ ಮಕ್ಕಳ ಹೇಳಿಕೆ ವಿಚಾರ, ಯಾರ ಅಪ್ಪ ಮಕ್ಕಳ ವಿಚಾರ ಹೇಳಿದ್ದಾರೊ ಗೊತ್ತಿಲ್ಲ. ಪ್ರತಾಪ್‌ಸಿಂಹ ಯಡಿಯೂರಪ್ಪ ಅವರ ಅಪ್ಪ ಮಕ್ಕಳ ವಿಚಾರ ಮಾತನಾಡಿರಬೇಕು. ಪಠ್ಯದಿಂದ ತೆಗೆದ ಮಾತ್ರಕ್ಕೆ ಜನರ ಮನಸಿನಿಂದ ಟಿಪ್ಪುವನ್ನು ತೆಗೆಯಲು ಸಾಧ್ಯವಿಲ್ಲ. ಮಹತ್ಮಾ ಗಾಂಧಿಯನ್ನ ಕೊಂದಂತವ್ರು ಬಿಜೆಪಿಯವರು. ಇತಿಹಾಸದ ಬಗ್ಗೆ ಮಾತನಾಡ್ತಾರೆ. ಬಿಜೆಪಿಯ ಈ ನಡೆ ನಿರೀಕ್ಷೆ ಮಾಡಿದ್ವಿ ತನ್ವೀರ್ ಹೇಳಿಕೆ. ಯಾವುದೇ ಪ್ರಚೋದನೆಗೆ ಒಳಗಾಗಬೇಡಿ. ಟಿಪ್ಪುವಿನ ಪಠ್ಯವನ್ನು ರಾಜ್ಯಮಟ್ಟದಲ್ಲಿ ತೆಗೆಯಬಹುದು. ಆದರೆ ಟಿಪ್ಪು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇರುವವರು. ರಾಜಕೀಯವಾಗಿ ಈ ರೀತಿ ಗೊಂದಲ‌ ಮೂಡಿಸಲು ಬಿಪಿಪಿ ಯತ್ನಿಸುತ್ತಿದೆ‌. ಟಿಪ್ಪು ಪ್ರೀತಿಸುವವರು , ಗೌರವಿಸುವವರಿಗೆ ಶಾಸಕ ತನ್ವೀರ್ ಸೇಠ್ ಮನವಿ. : .---.-