ವೈರಲ್ ಆಯ್ತು ಸಿಎಂ ಯಡಿಯೂರಪ್ಪ ಅವರ ‘ ಟಿಪ್ಪು ‘ ಬಣ್ಣನೆ. ಮೈಸೂರು, ಅ.31, 2019 : (.. ) ಶಾಲಾ ಪಠ್ಯ ದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರ ಶೌರ್ಯ, ಸಾಹಸಗಳ ಇತಿಹಾಸವನ್ನು ತಿಳಿಸುವ ಕೃತಿಗಳನ್ನು ಕೈ ಬಿಡಲು ಸರ್ಕಾರ ಮುಂದಾಗಿದೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ, ಯಡಿಯೂರಪ್ಪ ಅವರು ಟಿಪ್ಪು ಸುಲ್ತಾನ್ ರನ್ನು ಹಾಡಿ ಹೊಗಳಿದ್ದ ಬಣ್ಣಿಸಿದ್ದ ಘಟನೆ ವೈರಲ್ ಆಗಿದೆ. ಈ ಹಿಂದೆ 2012 ರಲ್ಲಿ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ದರ್ಗಾಗೆ ಭೇಟಿ ನೀಡಿದ್ದ ಯಡಿಯೂರಪ್ಪ, ಈ ವೇಳೆಟಿಪ್ಪು ಸುಲ್ತಾನ್ ಬಗ್ಗೆ ಸಂದರ್ಶಕರ ಪುಸ್ತಕ ದಲ್ಲಿ ಸ್ವಅಕ್ಷರದಿಂದ ಮೈಸೂರು ಹುಲಿ ಟಿಪ್ಪುವನ್ನು ಹಾಡಿ ಹೊಗಳಿದ್ದರು.ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ದ ವೀರಾವೇಷದಿಂದ ಹೋರಾಟ ಮಾಡಿದ್ದಾನೆ. ತಾಯಿನಾಡನ್ನು ಉಳಿಸಲು ಬಲಿದಾನ ಮಾಡಿದ್ದಾನೆ ಎಂದು ಯಡಿಯೂರಪ್ಪ ಟಿಪ್ಪುವನ್ನು ಕೊಂಡಾಡಿದ್ದರು.ಸ್ವತಃ ಯಡಿಯೂರಪ್ಪ ನವರೇ ಇಂಗ್ಲಿಷನಲ್ಲಿ ಬರೆದಿರುವ ಈ ವಾಕ್ಯಗಳು, ಇದೀಗ ಟಿಪ್ಪು ಚರಿತ್ರೆಯನ್ನು ಬ್ಯಾನ್ ಮಾಡ್ತೀವಿ ಎಂದು ಸಿಎಂ ಬಿಎಸ್ವೈ ಹೇಳಿಕೆ ನೀಡಿದ ಕಾರಣ ಮತ್ತೆ ಮುನ್ನೆಲೆಗೆ ಬಂದಿದೆ. : -.--