ಬರ್ತ್ ಡೇ ಚಾಕೊಲೆಟ್ ತಿಂದು ವಿದ್ಯಾರ್ಥಿಗಳು ಅಸ್ವಸ್ಥ ಮೈಸೂರು, ಅ.31, 2019 : (.. ) ಹುಟ್ಟು ಹಬ್ಬದ ಸಲುವಾಗಿ ನೀಡಿದ ಚಾಕೊಲೇಟ್ ಸೇವಿಸಿ ನಗರದ ಶಾಲೆಯೊಂದರ 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ನಳಂದ ಸ್ಕೂಲ್ ನ ೫ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೇ ಚಾಕೊಲೆಟ್ ಸೇವಿಸಿ ಅಸ್ವಸ್ಥಗೊಂಡವರು.ಇಂದು ಮಧ್ಯಾಹ್ನ ಸುಮಾರು ಎರಡುವರೆ ಗಂಟೆ ಸಮಯದಲ್ಲಿ ಚಾಕೊಲೆಟ್ ಸೇವೆನೆ ಮಾಡಿದ್ದ ವಿದ್ಯಾರ್ಥಿಗಳು ನಂತರ ಅಸ್ವಸ್ಥಗೊಂಡರು. ಕೂಡಲೇ ಈ ಮಕ್ಕಳನ್ನ ಶಾಲಾ ವಾಹನದ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.ವಿದ್ಯಾರ್ಥಿಯ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಚಾಕೊಲೆಟ್ ವಿತರಣೆ ಮಾಡಲಾಗಿತ್ತು. ಎಕ್ಲೆರ್ರಸ್ ಕಂಪನಿ ಚಾಕೊಲೆಟ್ ತಿಂದು ಅಸ್ವಸ್ಥರಾಗಿದ್ದ ವಿದ್ಯಾರ್ಥಿಗಳು. ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದ ಕೆ.ಆರ್. ಠಾಣೆ ಪೋಲಿಸರು. : ------