ತತಕ್ಷಣಕ್ಕೆ ಪಠ್ಯದಿಂದ ಟಿಪ್ಪು ಕೈ ಬಿಡಲ್ಲ, ಸಮಿತಿ ವರದಿ ಬಂದ ಮೇಲೆ ಅಂತಿಮ ನಿರ್ಧಾರ : ಶಿಕ್ಷಣ ಸಚಿವ ಸುರೆಶ್ ಕುಮಾರ್ ಸ್ಪಷ್ಟನೆ. ಬೆಂಗಳೂರು, ಅ.31, 2019 : (.. ) : ಶಾಲಾ ಪಠ್ಯದಿಂದ ‘ ಮೈಸೂರು ಹುಲಿ ‘ ಬಿರುದಾಂಕಿತ ಟಿಪ್ಪು ಸುಲ್ತಾನ್ ರ ಪಠ್ಯ ಕೈಬಿಡುವ ಸಂಬಂಧ ತಕ್ಷಣಕ್ಕೆ ರಾಜ್ಯ ಸರಕಾರ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದಿಷ್ಟು….. ಟಿಪ್ಪು ಸುಲ್ತಾನ್ ರ ಕುರಿತಾದ ವಿಷಯಗಳನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ದೂರು ಬಂದಿವೆ ಅದನ್ನ ಆಧರಿಸಿ ಪರಿಶೀಲಿಸುವಂತೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ( ಮತ್ತು - ) ಸೂಚಿಸಿದ್ದೇವೆ. ನವೆಂಬರ್ ೭ ರಂದು ಈ ಸಮಿತಿ ಸದಸ್ಯರು ಸಭೆ ಸೇರಲಿದ್ದಾರೆ. ಅವರು ಪರಿಶೀಲಿಸಿದ ಬಳಿಕ ಸರಕಾರದ ಗಮನಕ್ಕೆ ತರುತ್ತಾರೆ. ಆ ನಂತರ ಅದರ ಬಗ್ಗೆ ಕ್ರಮತೆಗೆದುಕೊಳ್ತೇವೆ. ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ದೂರು ಕೊಟ್ಟಿದ್ದಾರೆ. ಶಾಸಕರು ಕೊಟ್ಟ ಮನವಿ ಪರಿಗಣಿಸಲೇ ಬೇಕಲ್ಲ. ಹೀಗಾಗಿ ಪಠ್ಯ ತೆಗೆಯುವ ಬಗ್ಗೆ ಚಿಂತನೆ ನಡೆದಿದೆ ಅಷ್ಟೆ. ವಿಧಾನಸೌಧದಲ್ಲಿ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ. : .------ , , () . , .