ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ದ ಕಿಡಿ: ಟಿಪ್ಪು ಮೋಸದ ಬಗ್ಗೆ ಮುಂದಿನ ಪೀಳಿಗೆಗೆ ಹೇಳಿಕೊಡಬಾರದು – ಸಂಸದ ಪ್ರತಾಪ್ ಸಿಂಹ… ಮೈಸೂರು,ಅ,30,2019(..): ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಇತಿಹಾಸವನ್ನ ತೆಗೆಯಲು ಮುಂದಾಗಿರುವ ಸಿಎಂ ಬಿಎಸ್ ವೈಗೆ ಅಭಿನಂದನೆ ಸಲ್ಲಿಸುತ್ತೇನೆ. ಟಿಪ್ಪು ಮೋಸದ ಬಗ್ಗೆ ಮುಂದಿನ ಪೀಳಿಗೆಗೆ ಹೇಳಿಕೊಡಬಾರದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮದಕರಿ ನಾಯಕರನ್ನ ಮೋಸದಿಂದ ಕೊಂದ. ಯದುವಂಶದ ಆಡಳಿತವನ್ನ ಕಿತ್ತುಕೊಂಡ. ಒನಕೆ ಓಬ್ಬವ್ವರನ್ನ ಸಂಚು ಮಾಡಿ ಕೊಂದ. ಹೀಗಾಗಿ ಟಿಪ್ಪುವಿನ ಮೋಸದ ಇತಿಹಾಸದ ಬಗ್ಗೆ ಮುಂದಿನ ಪೀಳಿಗೆಗೆ ಹೇಳಿಕೊಡಬಾರದು ಎಂದರು. ಇದೇ ವೇಳೆ ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ತೆಗೆದುಹಾಕುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ದ ಕಿಡಿಕಾರಿದ ಸಂಸದ ಪ್ರತಾಪ್ ಸಿಂಹ, ಮಹಾರಾಜರು ಕಟ್ಟಿದ ಕಾಲೇಜಿನಲ್ಲಿ ಓದಿದ್ದಾರೆ. ಮಹಾರಾಜರು ಕಟ್ಟಿದ ಜಲಾಶಯದಲ್ಲಿ ನೀರು ಕುಡಿದಿದ್ದಾರೆ. ಆದರೇ ಮಹಾರಾಜರನ್ನ ನಾಶ ಮಾಡಿದ ಅಪ್ಪಮಕ್ಕಳ ಜಯಂತಿ ಆಚರಿಸುತ್ತಾರೆ. ಅಂತವರಿಂದ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದರು. : –- - –