ರಸ್ತೆ ಬದಿಯಲ್ಲಿ ಕುಳಿತಿದ್ದವರ ಮೇಲೆ ಲಾರಿ ಹರಿದು ಓರ್ವ ಸಾವು: ಇಬ್ಬರಿಗೆ ಗಾಯ… ಮೈಸೂರು,ಅ,30,2019(..): ರಸ್ತೆ ಬದಿ ಕುಳಿತಿದ್ದವರ ಮೇಲೆ ಲಾರಿ ಹರಿದು ಓರ್ವ ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಗೌಡರಹುಂಡಿ ಬಳಿ ಈ ಘಟನೆ ನಡೆದಿದೆ. ರಂಗಸ್ವಾಮಿ (25) ಮೃತ ಯುವಕ. ರಂಗಸ್ವಾಮಿ ಮೈಸೂರಿನ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದನು. ಘಟನೆಯಲ್ಲಿ ಪ್ರಸಾದ್ ಮತ್ತು ಕಿರಣ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಯುವಕರು ನಿನ್ನೆ ರಾತ್ರಿ ಊಟ ಮುಗಿಸಿ ಗ್ರಾಮದ ಬಸ್​ ಸ್ಟ್ಯಾಂಡ್​ನಲ್ಲಿ ಕುಳಿತಿದ್ದರು. ಈ ವೇಳೇ ಚಾಲಕನ ಅಜಾಗರೂಕತೆಯಿಂದ ಬಸ್​ ಸ್ಟ್ಯಾಂಡ್​ಗೆ ಲಾರಿ ಡಿಕ್ಕಿಯಾಗಿದೆ. ಕೂಡಲೇ ಬಸ್ ಸ್ಟಾಂಡ್ ಶೆಲ್ಟರ್ ಕುಸಿದು ಬಿದ್ದಿದ್ದು ಶೆಲ್ಟರ್ ಅಡಿ ಸಿಲುಕಿದ್ದ ಪ್ರಸಾದ್, ಕಿರಣ್ ಅವರನ್ನು ಗ್ರಾಮಸ್ಥರು ಹೊರಗೆಳೆದಿದ್ದಾರೆ. ರಕ್ಷಣಾ ಕಾರ್ಯದ ವೇಳೆ ರಂಗಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪರಿಹಾರಕ್ಕಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – – - – .