ವಿಚಾರಣೆಗೆಂದು ಕೋರ್ಟ್ ಗೆ ಕರೆ ತಂದ ವೇಳೆ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್…. ಕೊಡಗು,ಅ,29,2019(..): ವಿಚಾರಣೆಗೆಂದು ಕೋರ್ಟ್ ಗೆ ಕರೆತಂದ ವೇಳೆ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಎಸ್ಕೇಪ್‌‌ ಆಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆ ತಾಲ್ಲೂಕು ಯಡವನಾಡು ಸೂಳೆಬಾವಿ ನಿವಾಸಿ ರಾಮು‌ ಎಸ್ಕೇಪ್ ಆಗಿ ಇದೀಗ ಅರೆಸ್ಟ್ ಆದ ಆರೋಪಿ. ರಾಮು ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ನಿನ್ನೆ ಮುಂಜಾನೆ ಪೊಲೀಸರು ಬಂಧಿಸಿದ್ದರು. ಈ ನಡುವೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಪ್ರಥಮ‌ ದರ್ಜೆ ನ್ಯಾಯಾಲಯಕ್ಕೆ ವಿಚಾರಣೆಗೆಂದು ಕರೆತಂದಾಗ ಆರೋಪಿ ರಾಮು ಎಸ್ಕೇಪ್ ಆಗಿದ್ದ. ನ್ಯಾಯಾಲಯ ಬಳಿ ಮೂತ್ರ ವಿಸರ್ಜನೆಗೆಂದು ತೆರಳಿ ಅಲ್ಲಿಂದ ಪರಾರಿಯಾಗಿದ್ದ ಆರೋಪಿ ರಾಮುನನ್ನ ಕುಶಾಲನಗರ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. : - - –- .