ಕರ್ನಾಟಕ ಮೂಲದ ಇಬ್ಬರು ಸೇರಿ ಮೂವರು ನಕ್ಸಲರ ಹತ್ಯೆ…. ಕೇರಳಾ,29,2019(..): ಕರ್ನಾಟಕ ಮೂಲದ ಇಬ್ಬರು ಸೇರಿ ಮೂವರು ನಕ್ಸಲರನ್ನ ಕೇರಳಾದಲ್ಲಿ ಪೊಲೀಸರು ಹತ್ಯೆಗೈದಿರುವ ಘಟನೆ ನಡೆದಿದೆ. ಕೇರಳಾದ ಪಾಲಕ್ಕಡ್ ನಲ್ಲಿ ಮೂವರು ನಕ್ಸಲರನ್ನ ಹತ್ಯೆ ಮಾಡಲಾಗಿದೆ. ಕರ್ನಾಟಕದ ಚಿಕ್ಕಮಗಳೂರು ಮೂಲದ ಶ್ರೀಮತಿ ಮತ್ತು ಸುರೇಶ್ ಕುಮಾರ್ ಸೇರಿ ಮೂವರು ಹತ್ಯೆಯಾದ ನಕ್ಸಲರು. ನಕ್ಸಲ್ ನಿಗ್ರಹ ಪಡೆ ಮತ್ತು ಥಂಡರ್ ಬೌಲ್ಟ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಎನ್ ಕೌಂಟರ್ ಮಾಡಲಾಗಿದೆ. ಘಟನೆಯಲ್ಲಿ ರಾಜ್ಯದ ಚಿಕ್ಕಮಗಳೂರಿನ ಶ್ರೀಮತಿ ಎಸ್ ಎಸ್ ಎಲ್ ಸಿ ನಂತರ 2008ರಿಂದಲೂ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಶ್ರೀಮತಿ ಮೇಲೆ 10 ಪ್ರಕರಣಗಳು ದಾಖಲಾಗಿವೆ. ಪಾಲಕ್ಕಡ್ ಕಾಡಿನಲ್ಲಿ ಪೊಲೀಸರು ಕೂಬಿಂಗ್ ನಡೆಸುತ್ತಿದ್ದ ವೇಳೆ ಎನ್ ಕೌಂಟರ್ ಗೆ ಮೂವರು ನಕ್ಸಲರು ಬಲಿಯಾಗಿದ್ದಾರೆ. : –- –-