ಯಶ್-ರಾಧಿಕಾ ಜೋಡಿಯ ದೀಪಾವಳಿ ವಿಶ್ ವೀಡಿಯೋ ವೈರಲ್ ! ಬೆಂಗಳೂರು, ಅಕ್ಟೋಬರ್ 29, 2019 (..):ದೀಪಾವಳಿ ವಿಶೇಷವಾಗಿ ಯಶ್ ತಮ್ಮ ಕುಟುಂಬದವರೊಂದಿಗೆ ವಿಡಿಯೋ ಮಾಡಿ ತಮ್ಮ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗಿದೆ. ತಮ್ಮ ಅಭಿಮಾನಿಗಳಿಗೆ ಶುಭಕೋರುವ ಸಲುವಾಗಿ ಕುಟುಂಬ ಸಮೇತರಾಗಿ ರಾಧಿಕಾ, ಯಶ್ ಹಾಗೂ ಐರಾ ವಿಡಿಯೋ ಮಾಡಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋ ಬರೋಬ್ಬರಿ ಎಂಟು ಲಕ್ಷಕ್ಕೂ ಅಧಿಕ ವ್ಯೂವ್ಸ್ ಕಂಡಿದೆ. ಹಾಗೂ ಅಭಿಮಾನಿಗಳ ವಾಟ್ಸ್ ಅಪ್,ಫೇಸ್ ಬುಕ್, ಇನ್ಸ್ಟಾಗ್ರಾಮ್ ಸ್ಟೇಟಸ್ ಗಳಲ್ಲಿ ಕೂಡ ಐರಾ ವಿಡಿಯೋ ಹರಿದಾಡುತ್ತಿದೆ.