ಭಾರಿ ಮಳೆಗೆ ಮನೆ ಕುಸಿದು 2 ವರ್ಷದ ಮಗು ಸಾವು… ಕೊಪ್ಪಳ,ಅ,28,2019(..): ಭಾರಿ ಮಳೆಯಿಂದಾಗಿ ಮನೆ ಕುಸಿದು ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಈ ಘಟನೆ ನಡೆದಿದೆ. ದುರುಗಪ್ಪ, ಲಕ್ಷ್ಮಿ ದಂಪತಿಯ ಎರಡು ವರ್ಷದ ಮಗು ಮೌನೀಶ್ ಮೃತಪಟ್ಟ ಮಗು. ಘಟನೆಯಲ್ಲಿ ದುರುಗಪ್ಪ ಮತ್ತು ಲಕ್ಷ್ಮಿ ದಂಪತಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : 2-- - – - - -