ಶಾಲಾ ಮಕ್ಕಳಿಗೆ ದೀಪಾವಳಿ !: ಬಿಸಿಯೂಟದ ಮೆನು ಬದಲಾಯಿಸಿದ ಸರಕಾರ ಬೆಂಗಳೂರು, ಅಕ್ಟೋಬರ್ 27, 2019 (..):ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ, ಮಧ್ಯಾಹ್ನದ ಬಿಸಿಯೂಟದ ಮೆನು ಬದಲಾವಣೆ ಆಗಲಿದೆ. ಪರಿಷ್ಕೃತ ಆಹಾರ ಪಟ್ಟಿಯಂತೆ ನವೆಂಬರ್ 1ರಿಂದ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತದೆ. ನ.1ರಿಂದ ರಾಜ್ಯದ ಸರ್ಕಾರಿ/ಅನುಧಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟದ ಮೆನು ಹೀಗಿರಲಿದೆ.. ಸೋಮವಾರ– ಅನ್ನ, ಸೊಪ್ಪು, ತರಕಾರಿ ಸಾಂಬಾರುಮಂಗಳವಾರ– ತರಕಾರಿ ಪಲಾವ್ ಮತ್ತು ದಾಲ್. ತೊವ್ವೆ ಅಥವಾ ಟೊಮೆಟೋ ಬಾತ್ ಮತ್ತು ತರಕಾರಿ ಪಲ್ಯಬುಧವಾರ– ಅನ್ನ, ಬೇಳೆ ರಸಂ ಮತ್ತು ಕಾಳು ಪಲ್ಯ/ ತರಕಾರಿ ಪಲ್ಯಗುರುವಾರ– ಅನ್ನ ಮತ್ತು ಮಿಶ್ರ ತರಕಾರಿ ಸಾಂಬಾರುಶುಕ್ರವಾರ– ಬಿಸಿ ಬೇಳೆ ಬಾತ್ ಮತ್ತು ಖಾರ ಬೂಂಜಿಶನಿವಾರ– ತರಕಾರಿ ಉಪ್ಪಿಟ್ಟು/ಗೋಧಿ ವಾಂಗಿಬಾತ್/ಗೋಧಿ ಪೊಂಗಲ್/ಚಪಾತಿ ಸಾಗು, ಪೂರಿ ಸಾಗು