ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೆ ಪ್ರಿಯಾಂಕ ಚೋಪ್ರ ಬಂಡವಾಳ ! ಬೆಂಗಳೂರು, ಅಕ್ಟೋಬರ್ 26, 2019 (..):‘ಬಾಜೀರಾವ್ ಮಸ್ತಾನಿ’ ಬಳಿಕ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಹೌದು. ಪ್ರಿಯಾಂಕಾ ಚೋಪ್ರಾ ಮದುವೆ ನಂತರ ‘ಸ್ಕೈ ಈಸ್ ಪಿಂಕ್’ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ನಂತರ ಪ್ರಿಯಾಂಕಾ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಇದೀಗ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಜೊತೆ ಸೇರಿಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಕ್ಕೆ ಪ್ರಿಯಾಂಕಾ ಬಂಡವಾಳ ಹೂಡುತ್ತಿದ್ದಾರೆ. ಈ ಕುರಿತು ಮಾತುಕತೆ ನಡೆದಿದೆ.