ಇಂದು ಸಂಜೆ ‘ಕನ್ನಡ್ ಗೊತ್ತಿಲ್ಲ’ ಟೀಸರ್ ರಿಲೀಸ್ ಬೆಂಗಳೂರು, ಅಕ್ಟೋಬರ್ 26, 2019 (..):ಕನ್ನಡ್ ಗೊತ್ತಿಲ್ಲ ಸಿನಿಮಾ ಟ್ರೈಲರ್ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಇಂದು ಸಂಜೆ 6.30 ಕ್ಕೆ ಲಾಂಚ್ ಮಾಡುವುದಾಗಿ ಚಿತ್ರ ತಂಡ ಹೇಳಿದೆ. ಚಿತ್ರದಲ್ಲಿ ನಟಿ ಹರಿಪ್ರಿಯಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಹರಿಪ್ರಿಯಾ ಜತೆಗೆ ಸುಧಾರಾಣಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಘು ದೀಕ್ಷಿತ್ ಹಾಡಿದ ಕನ್ನಡ ಭಾಷೆ ಕುರಿತ ಹಾಡು ಎಲ್ಲರ ಗಮನ ಸೆಳೆದಿದೆ.