ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ‘ದಮಯಂತಿ’ ಹವಾ ! ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ರಾಧಿಕಾರ… ಬೆಂಗಳೂರು, ಅಕ್ಟೋಬರ್ 26, 2019 (..):ನಟಿ ರಾಧಿಕಾ ಕುಮಾರಸ್ವಾಮಿ ಈಗ ಕ್ವೀನ್ ಕಂಗನಾ ರಣಾವತ್ ಹಾದಿ ಹಿಡಿಯುತ್ತಿದ್ದಾರೆ. ದಮಯಂತಿ , ಭೈರಾದೇವಿ ಹೀಗೆ ಬ್ಯಾಕ್ ಟು ಬ್ಯಾಕ್ ಮಹಿಳಾ ಪ್ರಧಾನ ಸಿನಿಮಾಗಳು ರಿಲೀಸ್’​ ಗೆ ಸಜ್ಜಾಗುತ್ತಿವೆ.ನವರಸನ್ ನಿರ್ದೇಶಿಸಿ , ನಿರ್ಮಿಸಿರೋ ದಮಯಂತಿ ಅನುಷ್ಕಾ ಶೆಟ್ಟಿ ಅರುಂಧತಿ , ಭಾಗಮತಿ ಮೀರಿಸುವಂತಿದೆ. ಈಗಾಗಲೇ ಟ್ರೈಲರ್ ಸೂಪರ್ ಹಿಟ್ ಆಗಿದ್ದು , ರಾಧಿಕಾ ರೌದ್ರಾವತಾರಕ್ಕೆ ಇಡೀ ಸೌತ್ ದುನಿಯಾ ಹುಬ್ಬೇರಿಸಿದೆ .ದಮಯಂತಿ ಕನ್ನಡದ ಜೊತೆ ತೆಲುಗು , ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ​’ಗೆ ಸಜ್ಜಾಗುತ್ತಿದೆ.