ಅಯ್ಯಪ್ಪ ದೊರೆ ಕೊಲೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ… ಬೆಂಗಳೂರು,ಅ,25,2019(..): ಅಲಯನ್ಸ್ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಟಿನಗರ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಸುನೀಲ್, ಫೈರಜ್ ,ಮಂಜು ಮತ್ತು ಕಾಂತರಾಜ್ ಬಂಧಿತ ಆರೋಪಿಗಳು. ಪ್ರಕರಣ ಸಂಬಂಧ ಈವರೆಗೆ 7 ಮಂದಿ ಆರೋಪಿಯನ್ನ ಬಂಧಿಸಲಾಗಿದೆ. ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಆರ್ .ಟಿ ನಗರದ ಹೆಚ್ ಎಂಟಿ ಗ್ರೌಂಡ್ಸ್ ನಲ್ಲಿ ಅಯ್ಯಪ್ಪ ದೊರೆ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಅಲಯನ್ಸ್ ವಿವಿ ಕುಲಪತಿ ಸುಧೀರ್ ಅಂಗೂರ್ ಮತ್ತು ಸುಧೀರ್ ಸಹಾಯಕನಾಗಿದ್ದ ವಿವಿ ಉದ್ಯೋಗಿ ಸೂರಜ್ ಸಿಂಗ್‌ನನ್ನು ಬಂಧಿಸಲಾಗಿತ್ತು. ನಂತರ ಅಯ್ಯಪ್ಪ ದೊರೆ ಕೊಲೆಗೆ ಸೂರಜ್ ಸಿಂಗ್ ಗೆ ಸುಧೀರ್ ಅಂಗೂರ್ 1 ಕೋಟಿಗೆ ಸುಪಾರಿ ನೀಡಿದ್ದನು ಎಂಬ ಅಂಶ ಬೆಳಕಿಗೆ ಬಂದಿತ್ತು. : - - - -