ಕೇಂದ್ರ ಸರ್ಕಾರದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರೋಧ: ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ… ಬೆಂಗಳೂರು,ಅ,25,2019(..): ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ದೇಶದ ರೈತರನ್ನು ಮತ್ತೊಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಕ್ತ ವ್ಯಾಪಾರ ನೀತಿ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ. 2012ರಿಂದ ಇದರ ಚರ್ಚೆ ನಡೆಯುತ್ತಿದೆ. ಇಲ್ಲಿಯವರೆಗೆ 27 ಸಭೆಗಳನ್ನ ನಡೆಸಿದ್ದಾರೆ. ನವೆಂಬರ್ ೪ ರಂದು ರಾಷ್ಟ್ರಗಳ ಸಹಿ ಮಟ್ಟಕ್ಕೆ ತಲುಪಿದೆ. ಏಷ್ಯನ್ ಒಕ್ಕೂಟ ರಾಷ್ಟ್ರಗಳು ಮಲೇಶ್ಯಾ ಕಾಂಬೋಡಿಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ವಿಯಟ್ನಾಂ ಮಯನ್ಮಾರ್ ಸೇರಿ ಹಲವು ದೇಶಗಳ ನಡುವೆ ಒಪ್ಪಂದವಾಗಿದೆ. ಭಾರತ,ಚೀನಾ,ಆಸ್ಟ್ರೇಲಿಯಾ,ನ್ಯೂಜಿಲೆಂಡ್ ಜಪಾನ್, ಸೌಥ್ ಕೋರಿಯಾಗಳು ಇದಕ್ಕೆ ಒಪ್ಪಿಗೆ ಸೂಚಿಸಿವೆ. ವಿಶ್ವ ಮುಕ್ತಮಾರುಕಟ್ಟೆ ನೀತಿಗೆ ಒಪ್ಪಿಕೊಂಡಿವೆ. ಈ ನೀತಿಯಿಂದ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು. ಕೆಲವು ದೇಶಗಳಲ್ಲಿ ಕೃಷಿ ಉತ್ಪನ್ನ ಹೆಚ್ಚಿದೆ. ಅಂತಹ ರಾಷ್ಟ್ರಗಳು ಈ ನೀತಿಗೆ ಹೊಂಚುಹಾಕುತ್ತಿವೆ. ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆಯಿದೆ. ಹೀಗಾಗಿ ಇಲ್ಲಿ ವ್ಯಾಪಾರಕ್ಕೆ ಅತೊರೆಯುತ್ತಿದ್ದಾರೆ. ಇದರಿಂದ ನಮ್ಮ ಕೃಷಿ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳಲಿದೆ. ಈಗಲೇ ರಫ್ತು ಪ್ರಮಾಣ ನಮ್ಮಲ್ಲಿ ಕಡಿಮೆಯಾಗಿದೆ. ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದೇ ಹೆಚ್ಚಿದೆ. ಈ ನೀತಿ ಜಾರಿಗೆ ಬಂದರೆ ಹಾಲಿನ ಉತ್ಪನ್ನ ಆಮದಾಗಲಿವೆ. ಕಡಿಮೆ ದರಕ್ಕೆ ಆಮದಾಗುವುದರಿಂದ ರೈತರಿಗೆ ಹೊಡೆತ ಬೀಳಲಿದೆ. ನಮ್ಮ ರಾಜ್ಯದಲ್ಲಿ ೧೬ ಸಾವಿರ ಹಾಲು ಉತ್ಪನ್ನ ಸಂಘಗಳಿವೆ. ಕೆಎಂಎಫ್ ಗೆ ೭೭ ಲಕ್ಷ ಲೀಟರ್ ಪ್ರತಿದಿನ ಹಾಲು ಸಿಗಲಿದೆ. ಈ ನೀತಿ ಒಪ್ಪಿದರೆ ಕಡಿಮೆ ದರಕ್ಕೆ ಹಾಲು ಸಿಗಲಿದೆ. ಇಲ್ಲಿನ ಹಾಲಿಗೆ ಬೇಡಿಕೆ ಕುಸಿಯಲಿದೆ. ಇದು ರೈತರು ಹೈನುಗಾರಿಕೆ ಹೊಡೆತ ಬೀಳಲಿದೆ ಎಂದು ಮುಕ್ತ ವ್ಯಾಪಾರ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಮೋದಿಯವರ ಸ್ಟಾರ್ಟ್ ಆಪ್ ಇಂಡಿಯಾ ಮೇಕ್ ಇನ್ ಇಂಡಿಯಾ, ಸ್ಕಿಲ್ ಡೆವಲಪ್ ಮೆಂಟ್ ಉಪಯೋಗವಿಲ್ಲ. ಅವು ಬರೀ ಭಾಷಣದಲ್ಲಷ್ಟೇ ಉಳಿದು ಬಿಟ್ಟಿವೆ. ಹೀಗಾಗಿ ಹೊಸ ನೀತಿಗೆ ಕೇಂದ್ರ ಸರ್ಕಾರ ಒಪ್ಪಬಾರದು. ಸಾರ್ವಜನಿಕರ ಚರ್ಚೆಗೆ ಈ ವಿಚಾರ ಬಿಡಬೇಕು. ಚರ್ಚೆಯಿಲ್ಲದೆ ಒಪ್ಪಂದ ಮಾಡಿಕೊಂಡರೆ ದ್ರೋಹ ಬಗೆದಂತೆ ಎಂದು ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ ನೀಢಿದರು. ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಸಿದ್ದರಾಮಯ್ಯನವರ ಪತ್ರಿಕಾಗೋಷ್ಠಿಯ ಹೇಳೀದ್ದಿಷ್ಟು…… : –- - - .