ಯೂಟ್ಯೂಬ್ ನಲ್ಲಿ ಹವಾ ಸೃಷ್ಟಿಸಿದ ಧ್ರುವ ‘ಪೊಗರು’ ಬೆಂಗಳೂರು, ಅಕ್ಟೋಬರ್ 25, 2019 (..): ‘ಪೊಗರು’ ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ಹವಾ ಸೃಷ್ಟಿಸುತ್ತಿದೆ. ಸದ್ಯ, ಟ್ರೇಲರ್ 5 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. 1 ಲಕ್ಷದ 60 ಸಾವಿರ ಜನರು ಟ್ರೇಲರ್ ಲೈಕ್ ಮಾಡಿದ್ದಾರೆ. ಟ್ರೇಲರ್ ಬಿಡುಗಡೆಯಾದ 18 ಗಂಟೆಗಳ ಒಳಗೆ ಬರೋಬ್ಬರಿ 5 ಮಿಲಿಯನ್ ವೀಕ್ಷಣೆಟ್ರೇಲರ್ ಬಿಡುಗಡೆಯಾದ 42 ನಿಮಿಷಕ್ಕೆ 2 ಮಿಲಿಯನ್ ವೀಕ್ಷಣೆ ಸಿಕ್ಕಿತ್ತು. 51 ನಿಮಿಷದಲ್ಲಿ 1 ಮಿಲಿಯನ್ ಹಿಟ್ಸ್ ಗಡಿ ದಾಟಿತ್ತು.