ಮತ್ತೆ ಕಿರುತೆರೆಗೆ ಲೂಸ್ ಮಾದ ರಿ ಎಂಟ್ರಿ ! ಬೆಂಗಳೂರು, ಅಕ್ಟೋಬರ್ 25, 2019 (..): ನಟ ಲೂಸ್ ಮಾದ ಯೋಗಿ ಈಗ ಮತ್ತೆ ಬಣ್ಣದ ಬದುಕಿಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಯೋಗಿ ನಡೆಸಿಕೊಡುವ ವೀಕೆಂಡ್‌ ಸೆಲೆಬ್ರಿಟಿ ಶೋ ‘ಗಾನ ಬಜಾನಾ’ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ನವೆಂಬರ್‌ನಲ್ಲಿ ಆರಂಭವಾಗಲಿದೆ. ಕಿರುತೆರೆ ವೀಕ್ಷಕರನ್ನು ರಂಜಿಸುವ ಜತೆಗೆ ಕೈತುಂಬಾ ಸಿನಿಮಾ ಒಪ್ಪಿಕೊಂಡಿರುವ ಯೋಗಿ ಸಿನಿ ರಸಿಕರನ್ನು ಮತ್ತು ಅವರ ಅಭಿಮಾನಿಗಳನ್ನೂ ಮತ್ತೆ ಖುಷಿಪಡಿಸುವ ತವಕದಲ್ಲಿದ್ದಾರೆ.