ಬೆಂಗಳೂರಿನ ಐಟಿ ಕಚೇರಿಗೆ ಬಾಂಬ್ ಬೆದರಿಕೆ… ಬೆಂಗಳೂರು,ಅ,24,2019(..): ಬೆಂಗಳೂರಿನ ಐಟಿ ಕಚೇರಿಗೆ ವ್ಯಕ್ತಿಯೋರ್ವ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ತಡರಾತ್ರಿ ವ್ಯಕ್ತಿಯೋರ್ವ ಬಾಂಬ್ ಬೆದರಿಕೆ ಹಾಕಿದ್ದಾನೆ. ಇ-ಮೇಲ್ ಮೂಲಕ ಐಟಿ ಡೆಪ್ಯೂಟಿ ಕಮಿಷನರ್ ಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಶ್ವಾನದಳ, ಬಾಂಬ್ ನಿಷ್ಕ್ರಿಯಾ ದಳ ಕೂಡಲೇ ಆಗಮಿಸಿ ಪರಿಶೀಲನೆ ನಡೆಸಿದೆ. ಈ ನಡುವೆ ಇ-ಮೇಲ್ ಮೂಲಕ ಆರೋಪಿ ಹುಸಿಬಾಂಬ್ ಕರೆ ಮಾಡಿದ್ದು, ಇದೀಗ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. : - - – .