: ಟೀಂ ಇಂಡಿಯಾ ನಂ.1 ಸ್ಥಾನ ಭದ್ರ ಬೆಂಗಳೂರು, ಅಕ್ಟೋಬರ್ 23, 2019 (..): ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವೈಟ್‌ವಾಶ್ ಮಾಡಿ ಗರಿಷ್ಠ ಅಂಕ ಗಳಿಸಿದ ಬಳಿಕ ಭಾರತ ಈ ಸಾಧನೆ ಮಾಡಿದೆ. ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯಲ್ಲಿನ 2-0 ಅಂತರದ ಗೆಲುವನ್ನು ಮುಂದುವರಿಸಿದ ಭಾರತ ಇದೀಗ ಸತತ ಎರಡನೇ ಸರಣಿಯನ್ನು ಜಯಿಸಿ ಒಟ್ಟು 240 ಅಂಕ ಪಡೆದಿದೆ.