ಡಾಲಿಗೆ ಜೋಕರ್ ರೂಪ ನೀಡಿದ ಅಭಿಮಾನಿ ! ಬೆಂಗಳೂರು, ಅಕ್ಟೋಬರ್ 23, 2019 (..): ನಟ ಡಾಲಿ ಧನಂಜಯ್ ಜೋಕರ್ ಆಗಿದ್ದಾರೆ. ಅಂದಹಾಗೆ ಜೋಕರ್ ಮಾಡಿರುವುದು ಸಿನಿಮಾವಲ್ಲ ಬದಲಿಗೆ ಅವರ ಅಭಿಮಾನಿ.ಹೌದು. ಅವರ ಅಭಿಮಾನಿಯೊಬ್ಬರು ಧನಂಜಯ ಅವರ ಫೋಟೋವನ್ನು ಈ ರೀತಿಯಾಗಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಧನಂಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಧನಂಜಯ್ ಮುಂದಿನ ಸಿನಿಮಾ ‘ಪಾಪ್ ಕಾರ್ನ್ ಮಂಕಿ ಟೈಗರ್’ ಫೋಟೋವನ್ನು ಬಳಸಿ ಅದಕ್ಕೆ ಜೋಕರ್ ರೂಪ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಜೋಕರ್ ಪಾತ್ರ ಧನಂಜಯ್ ಗೆ ತುಂಬ ಚೆನ್ನಾಗಿ ಹೋಲಿಕೆ ಆಗಿದೆ.