ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು: ಇಬ್ಬರಿಗೆ ಗಾಯ… ಮೈಸೂರು,ಅ,21,2019(..): ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ತಿ.ನರಸೀಪುರ ತಾಲೂಕಿನ ತಲಕಾಡು- ಮುಡುಕುತೊರೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರೇಚಣ್ಣ(23) ಮೃತಪಟ್ಟ ಬೈಕ್ ಸವಾರ . ಮಣಿ(23) ಮತ್ತು ವಿಜಯ್ ಕುಮಾರ್ (22) ಗಾಯಗೊಂಡವರು. ಎಲ್ಲರೂ ಹೊಸ ಹೆಮ್ಮಿಗೆ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಮೂವರು ಯುವಕರು ಬಣ್ಣ ಹೊಡೆಯುವ ಕೆಲಸಕ್ಕಾಗಿ ಕೊಡಗನಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಬೈಕ್‌ನಲ್ಲಿ ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ತಲಕಾಡು ಉಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : - - -