ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ… ಮೈಸೂರು,ಅ,21,2019(..): ಕನ್ನಡ ರ್ಯಾಪರ್ ಚಂದನ್​ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರ ನಿಶ್ಚಿತಾರ್ಥ ಇಂದು ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ನೆರವೇರಿತು. ಬಿಗ್​ ಬಾಸ್​ 5ರ ಸ್ಪರ್ಧಿಗಳಾಗಿದ್ದ ಚಂದನ್-ನಿವೇದಿತಾ ಸ್ಪರ್ಧೆ ಮುಗಿದು ಹೊರಬಂದ ಮೇಲೆ ಇಬ್ಬರ ನಡುವೆ ಆತ್ಮೀಯತೆ ಇತ್ತು. ಈ ನಡುವೆ ಚಂದನ್ ಶೆಟ್ಟಿ ಯುವದಸರಾ ವೇದಿಕೆಯಲ್ಲೇ ನಿವೇದಿತಾಗೌಡಗೆ ಪ್ರಪೋಸ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದಾದ ಬಳಿಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಖಾಸಗಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು, ಆಪ್ತ ಬಂಧುಗಳು ಮತ್ತು ಹತ್ತಿರದ ಇಬ್ಬರ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಇದೀಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಹಸೆಮಣೆ ಏರಲು ಸಜ್ಜಾಗಿದೆ. : - – -