ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ವ್ಯಕ್ತಿ ಸಾವು ತುಮಕೂರು,ಅ,19,2019(,.) ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತುಮಕೂರು ಸದಾಶಿವನಗರದಲ್ಲಿ ನಡೆದಿದೆ. ಮಗನಿಗೆ ಗಾಳಿಪಟ ತೆಗೆದು ಕೊಡಲು ಹೋಗಿ ಹೈಟೆಂಕ್ಷನ್ ವೈರ್ ತಗುಲಿ ಅಬ್ಸಲ್ (50 ವರ್ಷ) ಎಂಬುವವರು ಸಾವನ್ನಪ್ಪಿದ್ದಾರೆ. ಮಗನ ಕೈಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ತಿಲಕ್ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. : - – – - -