ರವಿ ಬಸ್ರೂರು ‘ಗಿರ್ಮಿಟ್’ಗೆ ಉಪ್ಪು-ಹುಳಿ ಹಾಕಿದ ಯಶ್-ರಾಧಿಕಾ ಬೆಂಗಳೂರು, ಅಕ್ಟೋಬರ್ 19, 2019 (..): ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಮಕ್ಕಳ ಚಿತ್ರ ‘ಗಿರ್ಮಿಟ್’ ಸಿನಿಮಾಗೆ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಿದ್ದು, ಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಸಿನಿಮಾಗೆ ಧ್ವನಿ ನೀಡುವ ಮೂಲಕ ಇದೇ ಮೊದಲ ಬಾರಿಗೆ ಮಕ್ಕಳ ಚಿತ್ರವೊಂದಕ್ಕೆ ಸ್ಟಾರ್ ನಟರು ಧ್ವನಿ ನೀಡಿದ ಹೆಗ್ಗಳಿಕೆಗೆ ಯಶ್ ರಾಧಿಕಾ ಪಾತ್ರರಾಗಿದ್ದಾರೆ. ಸಿನಿಮಾದ ಟ್ರೈಲರ್ ಡಬ್ಬಿಂಗ್ ವಿಡಿಯೋ ಇಂದು ಬಿಡುಗಡೆಯಾಗುತ್ತಿದೆ. ಜತೆಗೆ ಮುಂದಿನ ತಿಂಗಳು 8 ನೇ ತಾರೀಖಿನಂದು ಸಿನಿಮಾ ಬಿಡುಗಡೆಯಾಗಲಿದೆ.