ರ್ಯಾಂಪ್ ವಾಕ್ ಅಭ್ಯಾಸ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು…. ಬೆಂಗಳೂರು,ಅ,19,2019(..): ಫ್ರೆಶರ್ಸ್ ಡೇಗಾಗಿ ರ್ಯಾಂಪ್ ವಾಕ್ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ವೇದಿಕೆಯ ಮೇಲೆಯೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪೀಣ್ಯಾದಲ್ಲಿರುವ ಏಮ್ಸ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಶಾಲಿನಿ(21) ಮೃತಪಟ್ಟ ವಿದ್ಯಾರ್ಥಿನಿ. ಶಾಲಿನಿ ಅದೇ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದರು. ಈ ನಡುವೆ ಫ್ರೆಶರ್ಸ್ ಡೇಗಾಗಿ ರ್ಯಾಂಪ್ ವಾಕ್ ಅಭ್ಯಾಸ ಮಾಡುತ್ತಲೇ ಶಾಲಿನಿ ಕುಸಿದು ಬಿದ್ದಿದ್ದು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – –- - …