ಟೀಂ ಇಂಡಿಯಾ ಟೆಸ್ಟ್ ತಂಡ ಸೇರಿದ ಶಾಬಾಝ್ ನದೀಂ ಹೊಸದಿಲ್ಲಿ, ಅಕ್ಟೋಬರ್ 19, 2019 (..): ಜಾರ್ಖಂಡ್‌ನ ಎಡಗೈ ಸ್ಪಿನ್ನರ್ ಶಾಬಾಝ್ ನದೀಂ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಆಡಲಿರುವ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕುಲದೀಪ್ ಯಾದವ್‌ಗೆ ಎಡಭುಜನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಎಡಗೈ ಸ್ಪಿನ್ನರ್ ಶಾಬಾಝ್ ನದೀಂ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಆಡಲಿರುವ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಸರಣಿ ಜಯಿಸಿರುವ ಕೊಹ್ಲಿ ಪಡೆ ಜೆಸ್‌ಸಿಎ ಸ್ಟೇಡಿಯಂನಲ್ಲಿ 3ನೇ ಪಂದ್ಯ ಗೆದ್ದುಕೊಂಡು ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಲು ಎದುರುನೋಡುತ್ತಿದೆ.