ಮತ್ತೆ ಕ್ರೀಡಾಂಗಣದಲ್ಲಿ ಘರ್ಜಿಸಲು ಯುವಿ ರೆಡಿ ಮುಂಬೈ,ಅಕ್ಟೋಬರ್ 18, 2019 (..):ಯುವರಾಜ್ ಸಿಂಗ್ ಅವರು ಮತ್ತೆ ಕ್ರೀಡಾಂಗಣದಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ದುಬೈನಲ್ಲಿ ನಡೆಯಲಿರುವ ಟಿ10 ಲೀಗ್ ಪಂದ್ಯಾವಳಿಯಲ್ಲಿ ಯುವಿ ಭಾಗವಹಿಸುವುದು ಖಚಿತವಾಗಿದೆ ಎಂದು ಲೀಗ್ ನ ಅಧ್ಯಕ್ಷ ಶಾಜಿ ಉಲ್ ಮುಲ್ಕ್ ಹೇಳಿದ್ದಾರೆ. ಈಗಾಗಲೇ ಟಿ10 ಲೀಗ್ ನಲ್ಲಿ ಆಡಲು ಯುವರಾಜ್ ಸಿಂಗ್ ಅವರೊಂದಿಗೆ ಒಪ್ಪಂದ ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದ್ದು, ಇನ್ನೂ ಶೀಘ್ರವೇ ಈ ಬಗ್ಗೆ ಸ್ಪಷ್ಟ ಮಾಹಿತಿ ಪ್ರಕಟಿಸುವ ಭರವಸೆಯೂ ನೀಡಿದ್ದಾರೆ.