ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್-ಪ್ರಿಯಾ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಷನ್ ಬೆಂಗಳೂರು,ಅಕ್ಟೋಬರ್ 18, 2019 (..):‘ಬಿಗ್ ಬಾಸ್’ ಕಾರ್ಯಕ್ರಮ ಮೊದಲ ವಾರದ ಅಂತ್ಯದಲ್ಲಿ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಇಂದು ಅಕ್ಟೋಬರ್ 18 ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್ ಮದುವೆಯಾಗಿ 18 ವರ್ಷ ತುಂಬಿದೆ. ಅವರ ಈ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆಯಲಿದೆ. ಸುದೀಪ್ ಬದುಕಿನ ಈ ಸಂಭ್ರಮದ ಕ್ಷಣವನ್ನು ‘ಬಿಗ್ ಬಾಸ್’ನಲ್ಲಿ ಆಚರಿಸಲು ಕಲರ್ಸ್ ಕನ್ನಡ ವಾಹಿನಿ ನಿರ್ಧಾರ ಮಾಡಿದೆ.