ಕುಟುಂಬದೊಂದಿಗೆ ಮೆಗಾಸ್ಟಾರ್ ಮೂವಿ ನೋಡಿದ ಉಪ ರಾಷ್ಟ್ರಪತಿ ನವದೆಹಲಿ, ಅಕ್ಟೋಬರ್ 17, 2019 (..):ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಐತಿಹಾಸಿಕ ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಅನ್ನು ವೀಕ್ಷಿಸಿದ್ದಾರೆ. ನವದೆಹಲಿಯ ಉಪ ರಾಷ್ಟ್ರಪತಿ ನಿವಾಸದಲ್ಲಿ ಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹ ವೆಂಕಯ್ಯನಾಯ್ಡು ಮತ್ತವರ ಕುಟುಂಬ ಸದಸ್ಯರೊಂದಿಗೆ ಉಪಸ್ಥಿತರಿದ್ದರುಚಿತ್ರ ವೀಕ್ಷಣೆಯ ಬಳಿಕ ಉಪ ರಾಷ್ಟ್ರಪತಿಗಳು ಚಿರಂಜೀವಿ ಅಭಿನಯವನ್ನು ಕೊಂಡಾಡಿದ್ದಾರೆ.