ಅಲಯನ್ಸ್ ವಿವಿ ವಿಶ್ರಾಂತ ವಿಸಿ ಬರ್ಬರ ಹತ್ಯೆ…. ಬೆಂಗಳೂರು,ಅ,16,2019(..): ಅಲಯನ್ಸ್ ವಿಶ್ವ ವಿದ್ಯಾನಿಲಯದ ವಿಶ್ರಾಂತ ವಿಸಿಯನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಆರ್.ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆನೇಕಲ್ ನಲ್ಲಿರುವ ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಹತ್ಯೆಯಾದವರು. ಅಯ್ಯಪ್ಪ ದೊರೆ ನಿನ್ನೆ ರಾತ್ರಿ ವಾಕಿಂಗ್ ಗೆಂದು ತೆರಳಿದ್ದರು. ಈ ವೇಳೆ ಹತ್ಯೆಯಾಗಿದೆ ಎನ್ನಲಾಗಿದೆ. ಇನ್ನು ವಾಕಿಂಗ್ ಗೆ ಹೋದ ಅಯ್ಯಪ್ಪ ಅವರು ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡಕಾಟ ನಡೆಸಿದ್ದು ಈ ಸಮಯದಲ್ಲಿ ಅಯ್ಯಪ್ಪ ದೊರೆ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಅಲಯನ್ಸ್ ವಿವಿಯಲ್ಲಿ ಹಲವು ವ್ಯಾಜ್ಯಗಳಿದ್ದವು. ಹೀಗಾಗಿ ಈ ವಿಚಾರದಲ್ಲಿ ಹತ್ಯೆ ನಡೆದಿರಬಹುದು. ಮೂರು ತಂಡಗಳನ್ನ ರಚಿಸಿ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. : - - –-