ನಾವು ಸಾಲ ಕೊಟ್ಟಿರುವುದು ಪಾರದರ್ಶಕವಾಗಿದೆ- ನವದೆಹಲಿಯಲ್ಲಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿಕೆ… ನವದೆಹಲಿ,ಅ,16,2019(..): ನಾವು ಸಾಲ ಕೊಡೋದಕ್ಕೆ ಇರೋದು. ಲಕ್ಷ್ಮೀ ಹೆಬ್ಬಾಳ್ಕರ್ ಆಗಲಿ ಯಾರೇ ಆಗಲಿ ಸಾಲ ಕೊಡ್ತೇವೆ. ನಾವು ಸಾಲ ಕೊಟ್ಟಿರುವುದು ಪಾರದರ್ಶಕವಾಗಿದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದರು. ನವದೆಹಲಿಯಲ್ಲಿ ಇಡಿ ವಿಚಾರಣೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಕಳೆದ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ದಾಖಲೆಗಳನ್ನ ಕೇಳಿದ್ದಾರೆ. ಬ್ಯಾಂಕ್ ಪತ್ರ ಕಾಗದ ಕೇಳಿದ್ದಾರೆ. ಅವರು ಕೇಳಿದ ದಾಖಲೆ ಕೊಡೋದು ನಮ್ಮ ಧರ್ಮ ಅವರು ಕೇಳಿದ್ದಕ್ಕಿಂತ ಹೆಚ್ಚಿನ ದಾಖಲೆ ಕೊಡುತ್ತೇನೆ ಎಂದರು. ನಾವು ಸಾಲ ಕೊಡುವುದಕ್ಕೆ ಇರೋದು. ಯಾರೇ ಆಗಲಿ ನಾವು ಸಾಲ ಕೊಡುತ್ತೇವೆ. ಇಡಿ ಕೇಳಿದ ದಾಖಲೆಗಳನ್ನ ಕೊಡುತ್ತೇನೆ ಎಂದು ಕೆ.ಎನ್ ರಾಜಣ್ಣ ತಿಳಿಸಿದರು. : -- -. -