ಮಂತ್ರಿ ಡೆವಲಪರ್ಸ್ ಗೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರಿಂದ ಲುಕ್ ಔಟ್ ನೋಟೀಸ್ ಜಾರಿ… ಬೆಂಗಳೂರು,ಅ,16,2019(..): ಬೋಗಸ್ ಸ್ಕೀಮ್ ಗಳಿಂದ ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಮೇಲೆ ಮಂತ್ರಿ ಡೆವಲಪರ್ಸ್ ವಿರುದ್ದ ದೂರು ದಾಖಲಾದ ಹಿನ್ನೆಲೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದಾರೆ. ಬೋಗಸ್ ಸ್ಕೀಮ್ ಗಳಿಂದ ವಂಚನೆ ಮಾಡಲಾಗುತ್ತದೆ ಎಂದು ಆರೋಪಿಸಿ ಗ್ರಾಹಕರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಮಂತ್ರ ಡೆವಲಪರ್ಸ್ ವಿರುದ್ದ ವಂಚನೆ ಸೇರಿ 8 ದೂರುಗಳು ದಾಖಲಾಗಿದ್ದವು. 420, 406, 409 ಮತ್ತು 120(ಬಿ) ಅಡಿ ಮಂತ್ರಿ ಡೆವಲಪರ್ಸ್ ಮಾಲೀಕ ಸುಶೀಲ್ ವಿರುದ್ದ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದಾರೆ. ಈ ನಡುವೆ ಮಂತ್ರಿ ಡೆವಲಪರ್ಸ್ ಮಾಲೀಕ ಸುಶೀಲ್ ಅವರ ಪತ್ನಿ ಸ್ನೇಹಲ್ ಮಂತ್ರಿ ಸಿಂಗಾಪುರಕ್ಕೆ ತೆರಳುವ ವೇಳೆ ತಡೆ ನೀಡಲಾಗಿದೆ. ಸ್ನೇಹಲ್ ಅವರಿಗೆ ವಿದೇಶಿ ಪ್ರವಾಸಕ್ಕೆ ನಿರಾಕರಿಸಲಾಗಿದೆ. : - -- –