19 ಮನೆ ಕಳ್ಳತನ, 64 ವಾಹನ ಕಳ್ಳತನ ಪ್ರಕರಣ ಭೇದಿಸಿದ ಮೈಸೂರು ನಗರ ಪೊಲೀಸರು. ಮೈಸೂರು,ಫೆಬ್ರವರಿ,22,2024(..):ವಿವಿಧ ಕಳವು ಪ್ರಕರಣಗಳಲ್ಲಿ ಮೈಸೂರು ನಗರ ಪೋಲಿಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು 19 ಮನೆ ಕಳ್ಳತನ ಪ್ರಕರಣ ಮತ್ತು 64 ವಾಹನ ಕಳ್ಳತನ ಪ್ರಕರಣಗಳ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 15 ಆರೋಪಿಗಳ ಬಂಧಿಸಿದ್ದು, ಒಟ್ಟು 1,69,71,200 ಮೌಲ್ಯದ 2 ಕೆ.ಜಿ 343 ಗ್ರಾಂ ಚಿನ್ನಾಭರಣ, 1ಕೆ.ಜಿ 357 ಗ್ರಾಂ ಬೆಳ್ಳಿ, 61 ದ್ವಿಚಕ್ರ ವಾಹನ, 2 ಕಾರು ಮತ್ತು 1,70,000 ನಗದು ವಶಕ್ಕೆ ಪಡೆದಿದ್ದಾರೆ. ನಗರದ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಕುರಿತು ಸುದ್ದಿಗೋಷ್ಠಿ ಮೂಲಕ‌ ಮಾಹಿತಿ ನೀಡಿದ ಮೈಸೂರು ನಗರ ಪೋಲಿಸ್ ಆಯುಕ್ತ ಬಿ.ರಮೇಶ್ ಬಾನೋತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೋಲಿಸ್ ಸಿಬ್ಬಂದಿಗಳನ್ನ ಪ್ರಶಂಸಿದರು. : - – 19 - - – 64 - -