ಇನ್ಫಿ ನಾರಾಯಣಮೂರ್ತಿ-ಸುಧಾ ಮೂರ್ತಿ ಪ್ರೇಮ ಕಥೆ ತೆರೆ ಮೇಲೆ ತರಲು ಬಾಲಿವುಡ್ ಸಿದ್ಧತೆ ! ಬೆಂಗಳೂರು, ಅಕ್ಟೋಬರ್ 16, 2019 (..):ಇನ್ಫೋಸಿಸ್​​ ನಾರಾಯಣ​​ ಮೂರ್ತಿ ಮತ್ತು ಸುಧಾ ಮೂರ್ತಿ ಪ್ರೇಮ ಕಥೆಯನ್ನು ತೆರೆಗೆ ತರಲು ಬಾಲಿವುಡ್​ನಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಬಾಲಿವುಡ್​ ನಿರ್ದೇಶಕಿ ಅಶ್ವಿನಿ ಅಯ್ಯರ್​ ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದು, ಈಗಾಗಲೇ ಕಥೆ ಸಿದ್ಧವಾಗ್ತಿದೆ. ಸುಧಾ ಮೂರ್ತಿ ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಯಶಸ್ವಿ ಜೋಡಿಯ ಪ್ರೇಮ ಪುರಾಣ, ಗೆಲುವಿನ ಹಾದಿ, ಬದುಕಿನ ತಿರುವುಗಳನ್ನು ತೆರೆಯ ಮೇಲೆ ತರೋ ಪ್ರಯತ್ನ ನಡೀತಿದೆ.ಜಗತ್ತಿನ ಅತ್ಯುನ್ನತ ಐಟಿ ಸಂಸ್ಥೆ ಇನ್ಫೋಸಿಸ್‌ ಅನ್ನು ಕಟ್ಟಿ ಬೆಳೆಸಿದ ಕೀರ್ತಿ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರದ್ದಾಗಿದೆ.