ಮೈಸೂರು ವಿಭಜನೆ ಬಗ್ಗೆ ಮಾತನಾಡಲು ಅವರು ಯಾರು..?- ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ… ಮೈಸೂರು,ಅ,15,2019(..): ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಪ್ರಸ್ತಾಪಿಸಿರುವ ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಮೈಸೂರು ವಿಭಜನೆ ಬಗ್ಗೆ ಮಾತನಾಡಲು ಅವರು ಯಾರು..? ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿರುವುದು ಸಿಎಂ ಬಿಎಸ್ ಯಡಿಯೂರಪ್ಪ. ಆದರೆ ಈ ಬಗ್ಗೆ ನಮ್ಮ ಜತೆ ಮಾತನಾಡಲು ಅವರು ಯಾರು ಎಂದು ಹೆಚ್.ವಿಶ್ವನಾಥ್ ವಿರುದ್ದ ಸಿದ್ಧರಾಮಯ್ಯ ಗುಡುಗಿದರು. ಬೆಂಗಳೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಡಿ.ದೇವರಾಜ ಅರಸು ಅವರು ರಾಷ್ಟ್ರನಾಯಕರು. ಅವರನ್ನ ಹುಣಸೂರಿಗೆ ಸೀಮಿತಗೊಳಿಸುವುದು ಬೇಡ. ವಿಶ್ವನಾಥ್ ಎಷ್ಟು ವರ್ಷದಿಂದ ರಾಜಕಾರಣದಲ್ಲಿ ಇದ್ದಾರೆ. ಮೈಸೂರು-ಚಾಮರಾಜನಗರ ವಿಭಜನೆಯಾದ ವೇಳೆ ಯಾಕೆ ಮಾತನಾಡಲಿಲ್ಲ. ಆದರೆ ಈ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಅಂದರೆ ಇದರಲ್ಲಿ ರಾಜಕೀಯವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. : - - –- - -..