ಕೊನೆ ದಿನದ ವಿಧಾನಸಭೆ ಕಲಾಪಕ್ಕೆ ಅರ್ಧಕ್ಕಿಂತ ಹೆಚ್ಚು ಶಾಸಕರು ಗೈರು.. ಬೆಂಗಳೂರು,ಅ,12,2019(..): ವಿಧಾನಮಂಡಲ ಅಧಿವೇಶನದ ಕೊನೆಯ ದಿನದ ವಿಧಾನಸಭೆ ಕಲಾಪಕ್ಕೆ ಬಹುತೇಕ ಶಾಸಕರು ಗೈರಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜ್ಯ ವಿಧಾನಮಂಡಲ ಅಧಿವೇಶನ ಕಲಾಪ ಇಂದು ಮುಕ್ತಾಯಗೊಳ್ಳಲಿದೆ. ಈ ನಡುವೆ ಅಧಿವೇಶನ ಅವಧಿ ಹೆಚ್ಚು ಮಾಡುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ. ಆದರೆ ಇಂದಿನ ಕಲಾಪಕ್ಕೆ ಅರ್ಧಕ್ಕಿಂದಲೂ ಹೆಚ್ಚು ಶಾಸಕರು ಗೈರಾಗಿದ್ದಾರೆ. ಸದನದಲ್ಲಿ ಆಡಳಿತ ಪಕ್ಷ ಬಿಜೆಪಿಯ 53 ಶಾಸಕರು, ಕಾಂಗ್ರೆಸ್ ನ 20 ಶಾಸಕರು ಮತ್ತು ಜೆಡಿಎಸ್ ನ 7 ಶಾಸಕರು ಸೇರಿ 80 ಸದಸ್ಯರು ಮಾತ್ರ ಹಾಜರಿದ್ದಾರೆ ಎನ್ನಲಾಗಿದೆ. ಇನ್ನು ಶಾಸಕರು ನಿನ್ನೆಯೇ ತಮ್ಮ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಇಂದು ಸಚಿವಾಲಯದ ಸಿಬ್ಬಂದಿಗಳಿಗೆ ರಜೆ ಇದ್ದರೂ ಸಿಬ್ಬಂದಿಗಳನ್ನ ಸರ್ಕಾರ ಕರೆಸಿಕೊಂಡಿದೆ. ಆದರೆ ಇತ್ತ ಶಾಸಕರು ಮಾತ್ರ ಸದನಕ್ಕೆ ಬಾರದೆ ಗೈರಾಗಿದ್ದಾರೆ. : -- – - -