ಸಾಲ ತೀರಿಸಲು ಕದ್ದ ಬೈಕ್ ನಲ್ಲಿ ಸರಗಳ್ಳತನ ಮಾಡಿದ್ದ ಇಬ್ಬರು ಕ್ಯಾಬ್ ಚಾಲಕರು ಅಂದರ್… ಬೆಂಗಳೂರು,ಅ,12,2019(..): ಸಾಲ ತೀರಿಸುವ ಸಲುವಾಗಿ ಕದ್ದ ಬೈಕ್ ನಲ್ಲಿ ಸರಗಳ್ಳತನ ಮಾಡಿ ಇಬ್ಬರು ಕ್ಯಾಬ್ ಚಾಲಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿರೇಶ್ ಮತ್ತು ತಿಪ್ಪೇಸ್ವಾಮಿ ಬಂಧಿತ ಕ್ಯಾಬ್ ಚಾಲಕರು. ಬಂಧಿತ ಇಬ್ಬರು ಆರೋಪಿಗಳು ಸರಗಳ್ಳತನ ಮಾಡುವ ಬಗ್ಗೆ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದರು. ನಂತರ ನಗರದ ಹೊಸೂರು ಬಳಿ ಬೈಕ್ ಕದ್ದಿದ್ದರು. ಕದ್ಧ ಬೈಕ್ ನಲ್ಲಿ ಇಬ್ಬರು ವೃದ್ಧೆಯ ಸರ ಎಗರಿಸಿದ್ದರು. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಮೊದಲ ಬಾರಿಗೆ ಸರಗಳ್ಳತನ ಮಾಡಿದ್ದ ಇಬ್ಬರು ಇದೀಗ ಸುಬ್ರಮಣ್ಯಪುರ ಠಾಣಾ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 1ಲಕ್ಷ ಮೌಲ್ಯದ ಚಿನ್ನದ ಸರ ಮತ್ತು ಬೈಕ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ. : - – – – -