‘ಸಾಹೋ’ ಫ್ಲಾಪ್: ಸಾಲದ ಸುಳಿಯಲ್ಲಿ ಪ್ರಭಾಸ್ ? ಮುಂಬೈ, ಅಕ್ಟೋಬರ್ 12, 2019 (..): ಸಾಹೋ ಫ್ಲಾಪ್ ಆಗಿದ್ದು, ಹಾಕಿದ ಬಂಡವಾಳವೂ ವಾಪಸ್ಸು ಬರಲಿಲ್ಲ. ಇದರಿಂದಾಗಿ ನಟ ಪ್ರಭಾಸ್​​ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಒಂದೆಡೆ ಸಾಹೋ ರಿಲೀಸ್​​ ಆಗಿ 400 ಕೋಟಿ ರೂ. ಸಂಗ್ರಹಿಸಿದೆ ಎಂದು ಪ್ರಚಾರ ಮಾಡಲಾಗುತ್ತಿದೆಯಾದರೂ, ಮೂಲಗಳ ಪ್ರಕಾರ ಅಷ್ಟು ಹಣ ಬಂದಿಲ್ಲ ಎನ್ನಲಾಗಿದೆ. ಸಿನಿಮಾ ಫ್ರೀ ರಿಲೀಸ್​​​​ಗೆ ಮುನ್ನ ನಿರ್ಮಾಪಕರು ತೆಗೆದುಕೊಂಡ ಹಣವೂ ವಿತರಕರಿಗೆ ವಾಪಸ್ಸು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ವಿತರಕರಿಗೆ ಪ್ರಭಾಸ್​​​ ಹಣ ವಾಪಸ್ಸು ಮಾಡುವುದಾಗಿ ಅಭಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.