ಅಮ್ಮನಾಗುವ ಖುಷಿಯಲ್ಲಿದ್ದಾರೆ ನಟಿ ಕಲ್ಕಿ ಕೊಹ್ಲಿನ್‌ ಮುಂಬೈ, ಅಕ್ಟೋಬರ್ 12, 2019 (..): ಬಾಲಿವುಡ್‌ ನಟಿ, ಬರಹಗಾರ್ತಿ ಕಲ್ಕಿ ಕೊಹ್ಲಿನ್‌ ಈಗ ಅಮ್ಮನಾಗುತ್ತಿರುವ ಸಂತಸದಲ್ಲಿದ್ದಾರೆ. ಹೌದು. ವಾರಗಳ ಹಿಂದೆ ಈ ನಟಿ, ತಾವು ಗರ್ಭಿಣಿ ಎಂದು ಹಂಚಿಕೊಂಡಿದ್ದರು. ಈ ಹೊಸ ಜವಾಬ್ದಾರಿಯನ್ನು ಅವರು ಉತ್ಸಾಹದಿಂದ ಸ್ವಾಗತಿಸಿದ್ದು, ರೋಮಾಂಚಿತರಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಕಲ್ಕಿ. ಜನವರಿಯಲ್ಲಿ ಮಗುವನ್ನು ಬರಮಾಡಿಕೊಳ್ಳಲು ಎದುರು ನೋಡುತ್ತಿರುವ ಅವರು, ‘ತೂಕದ ವಿಚಾರದಲ್ಲಿ ವೈದ್ಯರು ಮಗು ಆರೋಗ್ಯವಾಗಿ ಬೆಳೆಯುತ್ತಿದೆ ಎಂದು ತಿಳಿಸಿದ್ದಾರೆ.