ಶ್ರೀಮಂತ ದೇಗುಲಗಳಿಗೆ ಸರ್ಕಾರದಿಂದ ಕನ್ನ: ವಿಧಾನಸೌಧದ ಮುಂದೆ ಹುಂಡಿ ಇಡಿ – ಬಿವೈ ವಿಜಯೇಂದ್ರ ವಾಗ್ದಾಳಿ. ಮೈಸೂರು ,ಫೆಬ್ರವರಿ,22,2024(..):ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀಮಂತ ದೇಗುಲಗಳಿಗೆ ಕನ್ನ ಹಾಕಲು ಮುಂದಾಗಿದೆ. ಅದರ ಬದಲು ಸರ್ಕಾರ ನಡೆಸಲು ಆಗಲ್ಲ ಎಂದು ವಿಧಾನಸೌಧದ ಮುಂದೆ ಹುಂಡಿ ಇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸರ್ಕಾರಿ ನೌಕರಿಗೆ ಸಂಬಳ ಕೊಡಲು ಕಷ್ಟವಾಗಿರುವ ಪರಿಸ್ಥಿತಿ ರಾಜ್ಯದಲ್ಲಿ ಇದೆ. ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಅಭಿವೃದ್ದಿ ಕೆಲಸಕ್ಕೆ ಅನುದಾನ ನೀಡುತ್ತಿಲ್ಲ. ರಾಜ್ಯ ಸರ್ಕಾರ ಶ್ರೀಮಂತ ದೇಗುಲಗಳಿಗೆ ಕನ್ನ ಹಾಕಲು ಮುಂದಾಗಿದೆ ದೇಗುಲಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಹುಂಡಿ ಇಡಿ ಎಂದು ಲೇವಡಿ ಮಾಡಿದರು. : -- –-